ದೈವಗಳ ನರ್ತನ.

ದಕ್ಷಿಣ ಕನ್ನಡ: ಹಲವು ವೈಷಿಷ್ಟ್ಯತೆಗಳ ತಾಣ. ಕಣ್ಮನ ಸೆಳೆಯುವ ಗುಡಿ-ಮಂದಿರಗಳು, ಮನೋಗ್ನ ಬೀಚ್ ಗಳು, ಮತ್ತು ವಿಶ್ವವಿಖ್ಯಾತ “ಯಕ್ಷಗಾನ”, “ಕಂಬಳ”, “ಭೂತ ಕೋಲ”, ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವಾಗಿದೆ. ಎಲ್ಲೆಲ್ಲೂ ಕೇಸರಿ ಧ್ವಜ, ರಸ್ತೆಯ ಬದಿಯಲ್ಲಿ ತಾರೆಯಂತೆ ಮಿನುಗುತ್ತಿದ್ದ LED ಲೈಟುಗಳು, ದೇವಸ್ಥಾನದ ಬಳಿ ಮಾರುತ್ತಿದ್ದ ಆಕರ್ಶಕ ಅಂಗಡಿ ಮುಂಗಟ್ಟುಗಳು. ತಳಿರು ತೋರಣ ಹಾಗು ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಂಡಿದ್ದ “ಶ್ರೀ ವಿಷ್ಣುಮೂರ್ತಿ ದೇವಾಲಯ”ದಲ್ಲಿ ಜಾತ್ರೆಯ ಸಡಗರವಿತ್ತು. “ಭೂತ ಕೋಲ”ದ ಬಗ್ಗೆ ಓದಿದ್ದೆ, ಕೇಳಿದ್ದೆ, ಆದರೆContinueContinue reading “ದೈವಗಳ ನರ್ತನ.”

ಮಳೆಗಾಲದಲ್ಲಿ ಕರಾವಳಿ…ಭಾಗ 3

ಶಿರಸಿ ಮತ್ತು ಯೆಲ್ಲಾಪುರದ ಸುಂದರ ಘಟ್ಟಗಳ ಅಂತ್ಯಕಾಣುವ ಸ್ಥಳ “ಗೋಕರ್ಣ”. ಸಣ್ಣ ಸಮುದ್ರ ಪಟ್ಟಣವಾದ ಈ ಪುಣ್ಯ ಕ್ಷೇತ್ರ ವಿಶ್ವದಲ್ಲೇ ಪ್ರಸಿದ್ದಿ ಹೊಂದಿದೆ.ಉಡುಪಿಯಿಂದ ಗೋಕರ್ಣಗೆ ಸುಮಾರು ೪ ಗಂಟೆಗಳ ಪ್ರಯಾಣ. ಉಡುಪಿ >> ಕುಂದಾಪುರ >> ಮರವಂತೆ >> ಬೈಂದೂರು >> ಭಟ್ಕಳ >> ಮುರುಡೇಶ್ವರ >> ಹೊನ್ನಾವರ >> ಕುಮುಟಾ ಈ ರೀತಿಯಾಗಿ ಸಾಗಿ ಗೋಕರ್ಣ ಮುಟ್ಟುವಷ್ಟರಲ್ಲಿ ಸಾಕಷ್ಟು ಎಸ್ಟುರಿಗಳು, ಸೇತುವೆಗಳು ಸಿಗುವುವು. ಎಲ್ಲವು ಭಿನ್ನವಾಗಿದ್ದು, ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಒಂದು ಸಮುದ್ರ ತೀರದContinueContinue reading “ಮಳೆಗಾಲದಲ್ಲಿ ಕರಾವಳಿ…ಭಾಗ 3”

ಮಳೆಗಾಲದಲ್ಲಿ ಕರಾವಳಿ…ಭಾಗ 2

ಉಡುಪಿಯು ಹೊಸದಲ್ಲದಿದ್ದರು, ಅದರ ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು ನನಗೆ ಹೊಸದಾಗಿತ್ತು. ಶ್ರೀ ಕೃಷ್ಣನ ದರ್ಶನವಾದ ಮೇಲೆ ನನ್ನ ಮನಸ್ಸಿಗೆ ಮೂಡಿದ್ದು “ಶ್ರೀ ಕ್ಷೇತ್ರ ಮಂದಾರ್ತಿ”ಯ ಸಂದರ್ಶನ. ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಾಲಯವು ಬಹಳ ಪ್ರಸಿದ್ದಿ ಹೊಂದಿದ್ದು, ಅದರ ಮಹಿಮೆ ಅಪಾರ ಎಂಬುದು ನಾನು ಹಲವರಿಂದ ಕೇಳಿದ್ದೆ. ಉಡುಪಿ ಇಂದ ಕೇವಲ ೫೦ ಕಿ.ಮೀ ದೂರದಲ್ಲಿರುವ ಈ ಸಣ್ಣ ಹಳ್ಳಿಗೆ ಬಸ್ಸಿನ ಸೌಕರ್ಯ ಚೆನ್ನಾಗಿದೆ.ನನ್ನಂತಹ ಏಕಾಂಗಿ ಪ್ರಯಾಣಿಕನಿಗೆ ಸ್ಥಳೀಯ ಸಾರಿಗೆ ಬಹಳ ಉಪಕಾರಿಯಾಗುವುದು. ನನಗೆ ಬಹಳ ಖುಷಿ ಕೊಡುವ ವಿಚಾರ  ಎಂದರೆ ದಕ್ಷಿಣContinueContinue reading “ಮಳೆಗಾಲದಲ್ಲಿ ಕರಾವಳಿ…ಭಾಗ 2”

ಮಳೆಗಾಲದಲ್ಲಿ ಕರಾವಳಿ…ಭಾಗ 1

ಪ್ರವಾಸ: ಮನಸ್ಸಿಗೆ ಮುದ ನೀಡುವ ಚಟುವಟಿಕೆ. ನಮ್ಮ ತನು ಮನದಲ್ಲಿರುವ ದುಗುಡ ದುಮ್ಮಾನಗಳಿಗೆ ಅಂತ್ಯಕೊಟ್ಟು ಸಹಜ ಸ್ಥಿತಿಗೆ ತರುವ “ಪ್ರವಾಸ”, ನನಗೆ ಬಾಲ್ಯದಿಂದಲೂ ಬಹಳ ಅಚ್ಚು ಮೆಚ್ಚು. “ದೇಶ ಸುತ್ತು ಕೋಷ ಓದು” ಎಂಬುದಾಗಿ ಹಿರಿಯರು ಹೇಳಿರುವುದು ಎಷ್ಟು ಸತ್ಯವೆಂದು ಪ್ರವಾಸದ ಹಾದಿಯಲ್ಲಿ ಅರಿವಾಗುತ್ತದೆ. ನಮ್ಮ ನಾಡು, ನಮ್ಮ ಭಾಷೆ, ನಮ್ಮ ಸಂಸ್ಕೃತಿ, ಹೀಗೆ ಹಲವು ವಿಚಾರಗಳನ್ನ ತಿಳಿದುಕೊಳ್ಳುವ ಅವಕಾಶ ಪ್ರವಾಸದಲ್ಲಿಸಿಗುತ್ತದೆ. ಹೊಸ ಮುಖಗಳ ಪರಿಚಯವಾಗುತ್ತದೆ, ಹೊಸ ಜಾಗಗಳ ಪರಿಚಯವಾಗುತ್ತದೆ, ಇದರಿಂದ ಹೊಸ ಅನುಭವ ಉಂಟಾಗುತ್ತದೆ. ಸದಾ ಸಂಘಜೀವಿಯಾಗಿ ತಿರಿಗಾಡುವ ನಾನು, ಬಹಳ ವರ್ಷಗಳContinueContinue reading “ಮಳೆಗಾಲದಲ್ಲಿ ಕರಾವಳಿ…ಭಾಗ 1”

Design a site like this with WordPress.com
Get started