ದೈವಗಳ ನರ್ತನ.

ದಕ್ಷಿಣ ಕನ್ನಡ: ಹಲವು ವೈಷಿಷ್ಟ್ಯತೆಗಳ ತಾಣ. ಕಣ್ಮನ ಸೆಳೆಯುವ ಗುಡಿ-ಮಂದಿರಗಳು, ಮನೋಗ್ನ ಬೀಚ್ ಗಳು, ಮತ್ತು ವಿಶ್ವವಿಖ್ಯಾತ “ಯಕ್ಷಗಾನ”, “ಕಂಬಳ”, “ಭೂತ ಕೋಲ”, ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವಾಗಿದೆ.

ಎಲ್ಲೆಲ್ಲೂ ಕೇಸರಿ ಧ್ವಜ, ರಸ್ತೆಯ ಬದಿಯಲ್ಲಿ ತಾರೆಯಂತೆ ಮಿನುಗುತ್ತಿದ್ದ LED ಲೈಟುಗಳು, ದೇವಸ್ಥಾನದ ಬಳಿ ಮಾರುತ್ತಿದ್ದ ಆಕರ್ಶಕ ಅಂಗಡಿ ಮುಂಗಟ್ಟುಗಳು. ತಳಿರು ತೋರಣ ಹಾಗು ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಂಡಿದ್ದ “ಶ್ರೀ ವಿಷ್ಣುಮೂರ್ತಿ ದೇವಾಲಯ“ದಲ್ಲಿ ಜಾತ್ರೆಯ ಸಡಗರವಿತ್ತು.

ಭೂತ ಕೋಲ“ದ ಬಗ್ಗೆ ಓದಿದ್ದೆ, ಕೇಳಿದ್ದೆ, ಆದರೆ ಅದನ್ನು ಕಣ್ಣಾರೆ ನೋಡಿ ಅದರ ಸಾಂಕೇತಿಕ ಮಹತ್ವದ ಬಗ್ಗೆ ತಿಳಿದುಕೊಳ್ಳುವ ಸರಿಯಾದ ಅವಕಾಶ ಏಂದಿಗೂ ಒದಗಿರಲಿಲ್ಲ, ಆದರೆ ಅದು ಇತ್ತೀಚಿಗೆ ಬಂದೊದಗಿತು. ಇದು ದೇವ ಮತ್ತು ದೈವಗಳ ಮಧ್ಯೆ ನಡೆಯುವ ಪಾರಂಪರಿಕ ಆಚರಣೆ. ತುಳುನಾಡಿನ ಹಿರಿಮೆ.

ದೈವಗಳಾದ : “ಕೊಡಮಣಿತ್ತಾಯ”, “ಮುಜ್ಜಿನ್ನಾಯ”, “ಕಲ್ಲುರ್ಟಿ”, “ಕಲ್ಕೊಡ”

ದೇವರು ಸಕಲ ಚರಾಚರ ವಸ್ತುಗಳನ್ನು ಕಾಪಾಡಿದರೆ, “ದೈವ”, ದೇವರನ್ನು ದುಷ್ಟ ಶಕ್ತಿಗಳಿಂದ ಕಾಪಾಡುವನೆಂದು ಪುರಾಣಗಳಲ್ಲಿ ಬಣ್ಣಿಸಿದ್ದಾರಂತೆ. ತುಳುನಾಡಿನ ಜನರು ದೇವರನ್ನು ಭಕ್ತಿಯಿಂದ ಪೂಜಿಸಿದರೆ, ದೈವರನ್ನು ಭಯದಿಂದ ಪೂಜಿಸಿವರು. ಈ ಭಯ-ಭಕ್ತಿಯೇ ತಮಗೆ ಒಳ್ಳೆಯದನ್ನು ಮಾಡುವುದೆಂದು ಅವರ ಅಚಲ ನಂಬಿಕೆ.

ಭೂತ ಕೋಲ“ವು ಒಂದು ಬಗೆಯ ಆಚರಣೆಯಾಗಿದ್ದು, ಅದನ್ನು ನಡೆಸಲು ವಿಶೇಷವಾದ ಗುಂಪೊಂದನ್ನು ಬರಹೇಳಿರುತ್ತಾರೆ. ದಕ್ಷಿಣ ಕನ್ನಡದಲ್ಲಿ ಇಂತಹ ಗುಂಪುಗಳು ಬಹಳಷ್ಟು ಇದ್ಡು, ಹಲವು ತಲೆಮಾರುಗಳಿಂದ ಕೋಲವನ್ನು ನಡೆಸುತ್ತಾ ಬಂದಿರುತ್ತಾರೆ.

ಕೋಲದ ಗುಂಪೊಂದು ತೆಂಗಿನ ಗರಿಗಳಿಂದ ಉಡುಪನ್ನು ಕಟ್ಟುತ್ತಿರುವುದು. ಈ ಉಡುಪನ್ನು ಗುಂಪಿನ ನಾಯಕನು ಕೋಲದ ಸಮಯದಲ್ಲಿ ಧರಿಸುತ್ತಾನೆ.
ಗುಂಪಿನ ಸದಸ್ಯನು ತನ್ನ ಉಡುಪನ್ನು ಪರಿಶೀಲಿಸುತ್ತಿರುವುದು.

ಭೂತದ ಕೋಲ ಶುರುವಾಗುವ ಮುನ್ನ, ದೇವಾಲಯದಲ್ಲಿ ಹಲವು ಪೂಜೆ-ಪುನಸ್ಕಾರಗಳು ನಡೆಯುವುದು. ಈ ದೇವತಾಚರಣೆಯು ಕೋಲಕ್ಕೆ ನಾಂದಿಯಾಗಿದ್ದು ಇದನ್ನು ಬಹಳ ಶ್ರದ್ದೆಯಿಂದ ಆಚರಿಸುತ್ತಾರೆ.

: ಗುಂಪಿನ ಮುಖ್ಯಸ್ಠ ಪೂರ್ವ ತಯಾರಿಯಲ್ಲಿ ತೊಡಗಿರುವುದು.
ಬ: ಪ್ರಾಚೀನ ತುಳುವ ವಾಚನಗಳನ್ನು ಜಪಿಸುವ ಮೂಲಕ ದೈತ್ಯಾತ್ಮಗಳನ್ನು ಪ್ರಚೋದಿಸುವ “ಕೊಡಮಣಿತ್ತಾಯ” ದೈವದ ವೇಷದಾರಿ.

ಕೊಡಮಣಿತ್ತಾಯವನ್ನು ನಿರೂಪಿಸುವ ಗುಂಪಿನ ಮುಖ್ಯಸ್ಥನನ್ನು ಹೆಚ್ಚು ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ ಮತ್ತು ಉಳಿದವರಿಗಿಂತ ತತ್ವಬದ್ಧವೆಂದು ಕರೆಯಲಾಗುತ್ತದೆ. ಗುಂಪಿನ ಪ್ರತಿ ಜಾನಪದ ಸದಸ್ಯರು ವರ್ಣರಂಜಿತ ಬಟ್ಟೆಗಳು, ಹೂವುಗಳು, ಬಳೆಗಳು, ಆಭರಣಗಳು ಮತ್ತು ಇತರ ಧಾರ್ಮಿಕ ವಸ್ತುಗಳಿಂದ ಕಂಗೊಳಿಸಿರುತ್ತಾರೆ. ಪೂರ್ವಭಾವಿ ಕೆಲಸಕ್ಕೆ ಸಹಾಯ ಮಾಡಲು ಅವರೊಂದಿಗೆ ಸಹಾಯಕರ ಗುಂಪು ಇರುತ್ತದೆ, ಅವರು ನೃತ್ಯಗಾರರಿಗೆ ವೇಷ-ಭೂಷಣಗಳ ಸಿದ್ದತೆಯಲ್ಲಿ ತೊಡಗಿರುತ್ತಾರೆ.

ಕೋಲದ ಮುಖ್ಯ ಅಂಶವೆಂದರೆ ಸಂಗೀತ. ಆದ್ದರಿಂದ, ಸಂಗೀತದ ಗುಂಪೊಂದು ಸಹ ಬಂದಿರುತ್ತಾರೆ. ನೃತ್ಯ ಮತ್ತು ನಾದೋಪಾಸನೆಯಿಂದ ಇಡೀ ಅಂಗಳವು ರೋಚಕವಾಗಿರುತ್ತದೆ.


ಕೋಲ ನಡೆಸುವಾತರ ಸೊಂಟಕ್ಕೆ ವಿಶಿಷ್ಟವಾದ “ಸಿರಿ”ಯನ್ನು ಸಜ್ಜುಗೊಳಿಸಿ ಕಟ್ಟಲ್ಪಟ್ಟಿದೆ. ಸಿರಿಯ ಸಾಂದರ್ಭಿಕ ಮಹತ್ವವನ್ನು ಕುಣಿತದ ಸಮಯದಲ್ಲಿ ಗಮನಿಸಬಹುದು.
ಹೂಮಾಲೆಗಳಿಂದ ಅಲಂಕರಿಸಲ್ಪಟ್ಟ ಕೋಲದ ಆರಾಧಕ, ದೇವರನ್ನು ಪ್ರಾರ್ಥಿಸುತ್ತಿರುವುದು.

ಆಚರಣೆಯಲ್ಲಿ ಹಲವಾರು ಪೂಜೆಗಳು ಮತ್ತು ಕಾರ್ಯವಿಧಾನಗಳು ಇರುವುದರಿಂದ ಕೋಲ ನೃತ್ಯವು ಸಾಮಾನ್ಯವಾಗಿ ಇಡೀ ರಾತ್ರಿ ನಡೆಯುವುದು. ಭೂತಗಳಿಂದ ಆಶೀರ್ವಾದ ಪಡೆಯಲು ಗ್ರಾಮದ ಮುಖ್ಯಸ್ಥರು, ದೇವಾಲಯ ಸಮಿತಿ ಸದಸ್ಯರು, ಸಮುದಾಯದ ಮುಖ್ಯಸ್ಥರು ಮತ್ತು ಇನ್ನೂ ಅನೇಕ ಪ್ರಮುಖ ವ್ಯಕ್ತಿಗಳು ಮುಂದಿನ ಸಾಲಿನಲ್ಲಿ ಕುಳಿತಿರುತ್ತಾರೆ.

ಭೂತದ ಕುಣಿತ.

ಅನೇಕ ಧಾರ್ಮಿಕ ಸಮುದಾಯವು ಕೇವಲ ಮಂತ್ರವನ್ನು ನಂಬಿದರೆ, ತುಳುವ ಸಮುದಾಯವು ಮಂತ್ರ ಮತ್ತು ತಂತ್ರ ಎರಡರಲ್ಲೂ ನಂಬಿಕೆ ಇಡುತ್ತಾರೆ. ಆದ್ದರಿಂದ, ಕೋಲದ ದಿನದಂದು ಭೂತಗಳ ಮಾರ್ಗದರ್ಶಕರಾಗಿ ತಾಂತ್ರಿಕ ಅರ್ಚಕರೊಬ್ಬರು ನೆರೆದಿರುತ್ತಾರೆ.

ಭೂತ ಕೋಲ ಆಚರಣೆಯು ಹಳ್ಳಿಯಲ್ಲಿನ ಎಲ್ಲ ತೊಂದರೆ-ವಿವಾದಗಳನ್ನು ಕೊನೆಗೊಳಿಸಬಹುದೆಂದು ಜನರು ಬಲವಾಗಿ ನಂಬಿರುವರು. ಪುರಾತನ-ಜಾತ್ಯತೀತ ಕಾರ್ಯಕ್ರಮಗಳಲ್ಲಿ ಭೂತ ಕೋಲ ಕೂಡ ಒಂದು ಎಂದು ಹೇಳಲಾಗುತ್ತದೆ. ಆದ್ದರಿಂದ, ಕೋಲದ ದಿನದಂದು ಬಹಳಷ್ಟು ಜನರು ಸೇರುವುದು ಸಾಮಾನ್ಯದ ದೃಶ್ಯ. ಕುಣಿತದ ಹಾದಿಯಲ್ಲಿ ಹಲವಾರು ಗಮನ ಸೆಳೆಯುವ ಕ್ಷಣಗಳಿವೆ, ಅದು ಜನರನ್ನು ಬೇರೆ ಜಗತ್ತಿಗೆ ಕೊಂಡೊಯ್ಯುತ್ತದೆ.

ಕೆಲವು ಭೂತಾವತಾರಗಳನ್ನು ಕೆಳಗೆ ನೋಡಬಹುದು:

ಇಡೀ ಆಚರಣೆಯು ನೋಡಲು ಬಹಳ ಆಕರ್ಶಕವಾಗಿದ್ದು, ಅದು ನನ್ನನ್ನು ತಲ್ಲಣಗೊಳಿಸಿತು. ಈ ಚಟುವಟಿಕೆಗೆ ಅಗತ್ಯವಾದದ್ದು, ಶಕ್ತಿ, ನಿಖರತೆ ಮತ್ತು ದೈವತ್ವ. ಕೋಲದ ಗುಂಪು ಕೊನೆಯವರೆಗೂ ಅದನ್ನು ಸಮರ್ಪಕವಾಗಿ ನೀಡುತ್ತಾರೆ. ಎಲ್ಲ ಕಥೆಗಳಿಗೂ ಒಳ್ಳೆಯ ಅಂತ್ಯ ಕಾಣುವ ಹಾಗೆ, “ಭೂತ ಕೋಲ”ದ ದೈವವು ದೇವರಿಗೆ ಸಮರ್ಪಿಸುವುದರೊಂದಿಗೆ ಕೊನೆಗೊಳ್ಳುತ್ತದೆ. ದೇವರೇ ಈ ಬ್ರಹ್ಮಾಂಡದ ಸರ್ವೋಚ್ಚ ಶಕ್ತಿ ಮತ್ತು ಅವರಿಗೆ ಶರಣಾಗುವುದೇ ಪರಮ ಗುರಿ ಎಂಬುದು ಇದರ ಓಳಾರ್ಥ.

ಸ್ಥಳ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ತೆಂಕಕಾರಂದೂರು, ದಕ್ಷಿಣ ಕನ್ನಡ.

Leave a comment

Design a site like this with WordPress.com
Get started